ಬಾಳು ಬೆಳಗಿಸು…

ಮಾತಿನಲ್ಲಷ್ಟು ಸಂತಸ
ಮೌನದಲ್ಲಷ್ಟು ಸಂತಸ
ಮನೆಯಲ್ಲಷ್ಟು ಸಂತಸ
ಹೊರಗಷ್ಟು ಸಂತಸ
ಮನದೊಳಗಷ್ಟು ಸಂತಸ
ಹಂಚಲಷ್ಟು ಸಂತಸ
ಸಂತಸದೊಂದಿಗೆ ಒಡನಾಟ
ಸಂತಸವೇ ಜೀವನ ಪಾಠ
ಸಂತಸ ಬಿಟ್ಟು ಬೇರೆಲ್ಲ ನಗಣ್ಯ
ನಗು ಸಂತಸದ ಒಂದಂಗ.
ನಗುತ ನಕ್ಕು ನಗಿಸುತ
ಬಾಳು ಬೆಳಕಾಗಿಸು
ನಿನ್ನದು ಹಾಗೂ ಎಲ್ಲರದು.